ನನ್ನ ಹೊಲ ನನ್ನ ದಾರಿ” ಯೋಜನೆ ಅಂದರೇನು?
ನಮ್ಮ ಹಳ್ಳಿಗಳಲ್ಲಿ ಅಕ್ಕಪಕ್ಕದ ರೈತರ ನಡುವೆ ದೊಡ್ಡ ಜಗಳ ಅಂದ್ರೆ ಅದು “ದಾರಿ” ವಿಚಾರಕ್ಕೆ.
ಎಷ್ಟೋ ಸಲ ನಮ್ಮ ಜಮೀನಿಗೆ ಹೋಗೋಕೆ ಪಕ್ಕದವ್ರು ಬಿಡಲ್ಲ, ಅಥವಾ ಹಳೆ ದಾರಿನ ಮುಚ್ಚಿಬಿಡ್ತಾರೆ. ಇಂತಾ ಸಮಸ್ಯೆಗಳಿಗೆ ಪರಿಹಾರ ಕೊಡೋಕೆ ಸರ್ಕಾರ ತಂದಿರೋ ಯೋಜನೆಯೇ ಈ ‘ನನ್ನ ಹೊಲ ನನ್ನ ದಾರಿ’.

ನಿಮ್ಮ ಜಮೀನಿಗೆ ಹೋಗಲು ದಾರಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬಹಳಷ್ಟು ಕಡೆ ಸರ್ಕಾರಿ ನಕ್ಷೆಯಲ್ಲಿ ದಾರಿ ಇರುತ್ತೆ, ಆದ್ರೆ ಅಲ್ಲಿ ಯಾರೋ ಗಿಡ ಹಾಕಿರ್ತಾರೆ ಅಥವಾ ಬೇಲಿ ಹಾಕಿ ಮುಚ್ಚಿರ್ತಾರೆ. ಇಂತಾ ದಾರಿಗಳನ್ನು ಮತ್ತೆ ರೈತರಿಗಾಗಿ ಓಪನ್ ಮಾಡಿಕೊಡೋದೇ ಈ ಯೋಜನೆಯ ಮುಖ್ಯ ಉದ್ದೇಶ.
ಇದನ್ನೂ ಓದಿ. Loan : ನಿಮ್ಮ ಜಮೀನಿನ ಮೇಲೆ ಎಸ್ಟು ಸಾಲ ಇದೆ? ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ.
ಈ ಯೋಜನೆಯಿಂದ ನಮಗೆ ಏನೇನು ಅನುಕೂಲ?
ಜಗಳಕ್ಕೆ ಫುಲ್ ಸ್ಟಾಪ್: ದಾರಿ ವಿಚಾರಕ್ಕೆ ವರ್ಷಾನುಗಟ್ಟಲೆ ನಡೆಯೋ ಕೋರ್ಟ್ ಕಚೇರಿ ಅಲೆದಾಟ ನಿಲ್ಲುತ್ತೆ.
ಟ್ರ್ಯಾಕ್ಟರ್ ಸೌಲಭ್ಯ: ಕಾಲು ದಾರಿ ಇರೋ ಕಡೆ ಬಂಡಿ ದಾರಿ ಮಾಡಿಕೊಡ್ತಾರೆ, ಇದರಿಂದ ಟ್ರ್ಯಾಕ್ಟರ್ ಅಥವಾ ಎತ್ತುಗಳನ್ನ ಆರಾಮಾಗಿ ಜಮೀನಿಗೆ ತಗೊಂಡು ಹೋಗಬಹುದು.
Cattle shed : ದನದ ಕೊಟ್ಟಿಗೆ ನಿರ್ಮಾಣ ಮಾಡಲು 57,000/- ಸಹಾಯಧನ, ಅರ್ಜಿ ಸಲ್ಲಿಸಲು ಮಾಹಿತಿ.
ಬೆಳೆ ಸಾಗಣೆ ಸುಲಭ: ಜಮೀನಿನಲ್ಲಿ ಬೆಳೆದ ಮಾಲನ್ನು ಗಾಡಿ ಮೂಲಕ ಮೇನ್ ರೋಡ್‌ಗೆ ತರೋಕೆ ಇದು ಬಹಳ ಹೆಲ್ಪ್ ಆಗುತ್ತೆ.
ಜಮೀನಿನ ಬೆಲೆ ಹೆಚ್ಚಳ: ನಿಮ್ಮ ಹೊಲಕ್ಕೆ ಸರಿಯಾದ ದಾರಿ ಬಂತು ಅಂದ್ರೆ ಆಟೋಮ್ಯಾಟಿಕ್ ಆಗಿ ನಿಮ್ಮ ಆಸ್ತಿ ಬೆಲೆ ಕೂಡ ಜಾಸ್ತಿ ಆಗುತ್ತೆ.
ದಾರಿ ಬೇಕು ಅಂದ್ರೆ ನೀವು ಮಾಡಬೇಕಾದ್ದು ಏನು?
ಈ ಯೋಜನೆಯಡಿ ನೀವು ದಾರಿ ಪಡಿಯೋದು ಅಷ್ಟು ಕಷ್ಟವೇನಲ್ಲ, ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:
• ಅರ್ಜಿ ಸಲ್ಲಿಸಿ: ಮೊದಲು ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ (AC) ಕಚೇರಿಗೆ ಹೋಗಿ ಒಂದು ಅರ್ಜಿ ಕೊಡಬೇಕು.
ಇದನ್ನೂ ಓದಿ. Bele vime status : ನಿಮ್ಮ ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ.
• ನಕ್ಷೆ ಚೆಕ್ ಮಾಡಿ: ನಿಮ್ಮ ಜಮೀನಿನ ಹಳೆ ನಕ್ಷೆ (Map) ತೆಗೆಸಿ ನೋಡಿ. ಅಲ್ಲಿ ಮೊದಲು ದಾರಿ ಇತ್ತಾ ಅಂತ ಚೆಕ್ ಮಾಡ್ತಾರೆ.
• ಸ್ಥಳ ಪರಿಶೀಲನೆ: ನೀವು ಅರ್ಜಿ ಕೊಟ್ಟ ಮೇಲೆ ಕಂದಾಯ ಇಲಾಖೆಯವರು (RI ಅಥವಾ VA) ನಿಮ್ಮ ಜಮೀನಿಗೆ ಬಂದು ನೋಡ್ತಾರೆ. ದಾರಿ ಎಲ್ಲಿಂದ ಕೊಟ್ರೆ ಎಲ್ಲರಿಗೂ ಅನುಕೂಲ ಅಂತ ರಿಪೋರ್ಟ್ ಮಾಡ್ತಾರೆ.
• ಪೊಲೀಸ್ ಸಹಾಯ: ಯಾರಾದ್ರೂ ಉದ್ದೇಶಪೂರ್ವಕವಾಗಿ ಸರ್ಕಾರಿ ದಾರಿ ಮುಚ್ಚಿದ್ರೆ, ತಹಶೀಲ್ದಾರ್ ಅವರು ಪೊಲೀಸ್ ರಕ್ಷಣೆ ಕೊಟ್ಟು ಆ ದಾರಿನ ಬಿಡಿಸ್ತಾರೆ.
ಕರ್ನಾಟಕ ಭೂ ಕಂದಾಯ ಕಾಯ್ದೆ (ಸೆಕ್ಷನ್ 155)
ಒಂದು ವೇಳೆ ನೆರೆಯವರು ದಾರಿ ನೀಡಲು ನಿರಾಕರಿಸಿದರೆ, ನೀವು ಕಾನೂನಿನ ಮೊರೆ ಹೋಗಬಹುದು. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕಾರ, ರೈತನಿಗೆ ತನ್ನ ಜಮೀನಿಗೆ ಹೋಗಲು ದಾರಿಯ ಹಕ್ಕಿದೆ.
- ತಹಶೀಲ್ದಾರ್‌ಗೆ ಅರ್ಜಿ: ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಅವರಿಗೆ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿಯಲ್ಲಿ ಏನಿರಬೇಕು?: ನಿಮ್ಮ ಜಮೀನಿನ ಸರ್ವೆ ನಂಬರ್, ದಾರಿ ಬೇಕಾಗಿರುವ ಜಾಗದ ವಿವರ ಮತ್ತು ಸದ್ಯಕ್ಕೆ ದಾರಿ ಇಲ್ಲದಿರುವುದರಿಂದ ಆಗುತ್ತಿರುವ ತೊಂದರೆಗಳನ್ನು ಸ್ಪಷ್ಟವಾಗಿ ತಿಳಿಸಬೇಕು.
- ಸ್ಥಳ ಪರಿಶೀಲನೆ: ಅರ್ಜಿ ಸಲ್ಲಿಕೆಯಾದ ನಂತರ, ತಹಶೀಲ್ದಾರ್ ಅವರು ಕಂದಾಯ ನಿರೀಕ್ಷಕರು (RI) ಅಥವಾ ಗ್ರಾಮ ಆಡಳಿತಾಧಿಕಾರಿಗಳಿಗೆ (VA) ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸುತ್ತಾರೆ.
- ಆದೇಶ: ವರದಿಯ ಆಧಾರದ ಮೇಲೆ ಮತ್ತು ಅಗತ್ಯವಿದ್ದರೆ ಎರಡೂ ಕಡೆಯವರ ವಿಚಾರಣೆ ನಡೆಸಿ, ತಹಶೀಲ್ದಾರ್ ಅವರು “ಬಂಡಿದಾರಿ” ಅಥವಾ “ನಡೆದಾರಿ” ನೀಡುವಂತೆ ಆದೇಶಿಸಬಹುದು.
ಈಸ್ ಮೆಂಟ್ act
ಒಂದು ವೇಳೆ ನೀವು ಹಲವು ದಶಕಗಳಿಂದ (ಕನಿಷ್ಠ 20 ವರ್ಷಗಳಿಗಿಂತ ಹೆಚ್ಚು) ಬೇರೆಯವರ ಜಮೀನಿನ ಮೂಲಕವೇ ಹೋಗುತ್ತಿದ್ದರೆ, ನಿಮಗೆ ಆ ದಾರಿಯ ಮೇಲೆ ಕಾನೂನುಬದ್ಧ ಹಕ್ಕು ಬಂದಿರುತ್ತದೆ.
ಇದನ್ನು ‘ಸುಖಭೋಗದ ಹಕ್ಕು’ ಎನ್ನಲಾಗುತ್ತದೆ. ಯಾರಾದರೂ ಹಠಾತ್ತನೆ ಅಂತಹ ದಾರಿಯನ್ನು ತಡೆದರೆ ನೀವು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಬಹುದು.
My self malatesha from Karnataka state, india. I have well experienced in content writing since 2021, we publish daily news.