ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ! ರೈತರಿಗೆ ವಿಶೇಷ ಸೂಚನೆ.
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ಹವಾಮಾನ ಇಲಾಖೆ ತಂಪಾದ ಸುದ್ದಿಯೊಂದನ್ನು ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ, ಇಂದಿನಿಂದ (ಮಾರ್ಚ್ 27) ಏಪ್ರಿಲ್ 1ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಈ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ (Orange Alert)
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಿರಲಿದೆ. ವಿಶೇಷವಾಗಿ:
• ದಾವಣಗೆರೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇಲ್ಲಿ ಗುಡುಗು-ಮಿಂಚಿನ ಜೊತೆಗೆ ಜೋರು ಮಳೆಯಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಆಲಿಕಲ್ಲು ಮಳೆ?
ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ (Hailstorm) ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ವರುಣನ ಎಂಟ್ರಿ
ಬೆಂಗಳೂರಿನಲ್ಲಿ ಮಾರ್ಚ್ 29ರ ನಂತರ ಮಳೆ ಚಟುವಟಿಕೆಗಳು ಹೆಚ್ಚಾಗಲಿವೆ. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಗರಿಷ್ಠ ತಾಪಮಾನ 33°C ಆಸುಪಾಸಿನಲ್ಲಿರಲಿದೆ.
ಇದನ್ನು ಓದಿ. Pm kisan : ಯಾರಿಗೆಲ್ಲ ಸಿಗುತ್ತೆ? ಮತ್ತೆ ಸಿಗಲ್ಲ ಪಿಎಂ ಕಿಸಾನ್ 6000 ರೂ ಹಣ,
ರೈತರು ಮತ್ತು ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆಗಳು:
1 ಬೆಳೆ ರಕ್ಷಣೆ: ಉತ್ತರ ಕರ್ನಾಟಕದ ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಬೇಕು. ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಿ.
2 ಸಿಡಿಲಿನ ಭಯ: ಮಳೆ ಬರುವಾಗ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ಆಶ್ರಯ ಪಡೆಯಬೇಡಿ. ಸಿಡಿಲು ಬಡಿಯುವ ಅಪಾಯ ಹೆಚ್ಚಿರುತ್ತದೆ.
3 ಗಾಳಿಯ ವೇಗ: ಮಳೆಯ ಸಮಯದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಜಾಗರೂಕರಾಗಿರಿ.
ಬಿಸಿಲಿನಿಂದ ಬಸವಳಿದ ಭೂಮಿಗೆ ಈ ಅಕಾಲಿಕ ಮಳೆ ತಂಪೆರೆಯಲಿದ್ದರೂ, ಗುಡುಗು-ಸಿಡಿಲಿನ ಅಬ್ಬರ ಇರುವುದರಿಂದ ಸಾರ್ವಜನಿಕರು ಸುರಕ್ಷಿತವಾಗಿರಲು ಸೂಚಿಸಲಾಗಿದೆ.
Gruha lakshmi 26th installment : 26ನೇ ಕಂತಿನ ಗೃಹ ಲಕ್ಷ್ಮಿ ಹಣ ಜಮಾ.
ಮಳೆ ಬಗ್ಗೆ ಅಧಿಕೃತ ಮಾಹಿತಿ ಪಡೆಯಲು ಸರ್ಕಾರದ ಜಾಲತಾಣ ಬೇಟಿ ಮಾಡಲು ಇಲ್ಲಿ ಒತ್ತಿ.
ಸೂಚನೆ: ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಹೇಳುವುದಿಲ್ಲ ಮತ್ತು ಬಿತ್ತರಿಸುವುದಿಲ್ಲ, ಹೆಚ್ಚಿನ ಮಾಹಿತಿಗೆ ಪ್ರತಿದಿನ ನಮ್ಮ ಜಾಲತಾಣ ಬೇಟಿ ಮಾಡಿರಿ. https://mahitigotta.in/
My self malatesha from Karnataka state, india. I have well experienced in content writing since 2021, we publish daily news.