ರೇಷನ್ ಕಾರ್ಡ್ ತಿದ್ದುಪಡಿ (Ration Card Correction): ಈಜಿ ಸ್ಟೆಪ್ಸ್ ಇಲ್ಲಿದೆ ನೋಡಿ!
ನಮ್ಮ ಲೈಫ್ನಲ್ಲಿ Ration Card ಅನ್ನೋದು ಎಷ್ಟು ಇಂಪಾರ್ಟೆಂಟ್ ಅಂತ ನಮಗೆಲ್ಲ ಗೊತ್ತು.
ಬರೀ ಅಕ್ಕಿ-ಬೇಳೆ ತಗೊಳ್ಳೋಕೆ ಮಾತ್ರವಲ್ಲ, ಯಾವುದಾದರೂ ಗವರ್ನಮೆಂಟ್ ಸ್ಕೀಮ್ ಇರಲಿ ಅಥವಾ ಅಡ್ರೆಸ್ ಪ್ರೂಫ್ ಇರಲಿ, ರೇಷನ್ ಕಾರ್ಡ್ ಇಲ್ಲದಿದ್ರೆ ಕೆಲಸನೇ ಆಗಲ್ಲ.

Ration card correction : ರೇಷನ್ ಕಾರ್ಡ್ ತಿದ್ದುಪಡಿ ಮತ್ತು ದಾಖಲಾತಿ ಏನೇನು ಬೇಕು? ಮಾಹಿತಿ.
ಆದ್ರೆ ತುಂಬಾ ಜನರ ಕಾರ್ಡ್ನಲ್ಲಿ ಹೆಸರು ಮಿಸ್ಟೇಕ್ ಆಗಿರುತ್ತೆ ಅಥವಾ ಅಡ್ರೆಸ್ ಹಳೆಯದಾಗಿರುತ್ತೆ. ಇಂಥ ಸಣ್ಣ ಪುಟ್ಟ ತಪ್ಪುಗಳನ್ನ ಹೇಗೆ ಸರಿ ಮಾಡ್ಕೋಬೇಕು ಅನ್ನೋದನ್ನ ಇಲ್ಲಿ ಸಿಂಪಲ್ ಆಗಿ ಹೇಳ್ತೀನಿ ನೋಡಿ.
1. ಯಾವೆಲ್ಲಾ ಬದಲಾವಣೆ ಮಾಡಬಹುದು? (What can you change?)
ನಿಮ್ಮ ರೇಷನ್ ಕಾರ್ಡ್ನಲ್ಲಿ ಈ ಕೆಳಗಿನ ವಿಷಯಗಳನ್ನ ಈಸಿಯಾಗಿ ಅಪ್ಡೇಟ್ ಮಾಡಬಹುದು:
- Name Correction: ಹೆಸರಿನಲ್ಲಿ ಕಾಗುಣಿತ (Spelling) ತಪ್ಪುಗಳಿದ್ರೆ ಸರಿಪಡಿಸಬಹುದು.
- Address Change: ನೀವು ಮನೆ ಶಿಫ್ಟ್ ಮಾಡಿದ್ರೆ ಹೊಸ ಅಡ್ರೆಸ್ ಹಾಕ್ಸಬಹುದು.
- Adding New Member: ಮದುವೆಯಾದ ಮೇಲೆ ವೈಫ್ ಹೆಸರನ್ನ ಅಥವಾ ಮಗು ಹುಟ್ಟಿದ ಮೇಲೆ ಮಗುವಿನ ಹೆಸರನ್ನ ಆಡ್ ಮಾಡಬಹುದು.
- Removing Member: ಯಾರಾದರೂ ಮೃತಪಟ್ಟಿದ್ದರೆ ಅಥವಾ ಮದುವೆಯಾಗಿ ಹೋದವರ ಹೆಸರನ್ನು ತೆಗೆಸಬಹುದು.
- Photo & Age Update: ಹಳೆಯ ಫೋಟೋ ಬದಲಿಸುವ ಅಥವಾ ವಯಸ್ಸಿನ ( age )ಮಿಸ್ಟೇಕ್ ಇದ್ದಲ್ಲಿ ಸರಿ ಮಾಡಬಹುದು.
ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಶುರು, ದಾಖಲಾತಿ ಏನೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
2. ಬೇಕಾಗುವ ಡಾಕ್ಯುಮೆಂಟ್ಸ್ (Required Documents)
ನೀವು ಮಾಡೋ ಬದಲಾವಣೆಗೆ ತಕ್ಕಂತೆ ಒಂದಷ್ಟು ಪೇಪರ್ಸ್ ರೆಡಿ ಇಟ್ಕೋಬೇಕು:
ಬೇಕಾಗುವ ದಾಖಲೆಗಳು (Documents)
ಹೆಸರು ಸರಿಪಡಿಸಲು
ಆಧಾರ್ ಕಾರ್ಡ್ (Must), ಬರ್ತ್ ಸರ್ಟಿಫಿಕೇಟ್ ಅಥವಾ ಮಾರ್ಕ್ಸ್ ಕಾರ್ಡ್.
ಅಡ್ರೆಸ್ ಬದಲಿಸಲು address changing.
ಕರೆಂಟ್ ಬಿಲ್, ವಾಟರ್ ಬಿಲ್ ಅಥವಾ ರೆಂಟ್ ಅಗ್ರಿಮೆಂಟ್.
ಹೊಸ ಮೆಂಬರ್ ಸೇರಿಸಲು, new member adding
ಮಗುವಾದ್ರೆ ಬರ್ತ್ ಸರ್ಟಿಫಿಕೇಟ್. ಪತ್ನಿಯಾದ್ರೆ ಮ್ಯಾರೇಜ್ ಸರ್ಟಿಫಿಕೇಟ್ ಮತ್ತು ಅವರ ತಂದೆ ಮನೆಯಿಂದ ಹೆಸರು ತೆಗೆಸಿದ ಸರ್ಟಿಫಿಕೇಟ್ (Surrender Certificate).
ಹೆಸರು ತೆಗೆದುಹಾಕಲು, name deleting .
ಡೆತ್ ಸರ್ಟಿಫಿಕೇಟ್ ಅಥವಾ ಮ್ಯಾರೇಜ್ ಇನ್ವಿಟೇಶನ್.
ನೆನಪಿಡಿ: ಎಲ್ಲರ Aadhaar Card ಮತ್ತು Mobile Number ಲಿಂಕ್ ಆಗಿರೋದು ತುಂಬಾ ಮುಖ್ಯ.
3. ಸರಿಪಡಿಸುವುದು ಹೇಗೆ? (How to Apply?)
ಇದರಲ್ಲಿ ಎರಡು ದಾರಿಗಳಿವೆ, ನಿಮಗೆ ಯಾವುದು ಕಂಫರ್ಟಬಲ್ ಅನ್ಸುತ್ತೋ ಅದನ್ನ ಫಾಲೋ ಮಾಡಿ:
A. ಆನ್ಲೈನ್ ಮೂಲಕ (Online Method):
ನೀವು ಸ್ವತಃ ಮಾಡೋದಾದ್ರೆ Ahara Karnataka ವೆಬ್ಸೈಟ್ಗೆ ಹೋಗಿ, ಅಲ್ಲಿ ‘e-Services‘ ಟ್ಯಾಬ್ನಲ್ಲಿ ‘Amendment Request‘ ಆಪ್ಷನ್ ಸಿಗುತ್ತೆ. ಅಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿ ಅಪ್ಲಿಕೇಶನ್ ಹಾಕಬಹುದು. ಆದ್ರೆ ಇದು ಸ್ವಲ್ಪ ಟೆಕ್ನಿಕಲ್ ಅನಿಸಬಹುದು.
B. ಆಫ್ಲೈನ್ ಮೂಲಕ (Offline – Very Easy):
ನನ್ನ ಪ್ರಕಾರ ಇದು ಬೆಸ್ಟ್! ನಿಮ್ಮ ಹತ್ತಿರದ Karnataka One, Bangalore One, Grama One ಅಥವಾ ಯಾವುದಾದರೂ CSC Center ಗೆ ಹೋಗಿ. ಅಲ್ಲಿ ಬಯೋಮೆಟ್ರಿಕ್ (ಫಿಂಗರ್ಪ್ರಿಂಟ್) ಕೊಟ್ಟು ದಾಖಲೆಗಳನ್ನ ಸಬ್ಮಿಟ್ ಮಾಡಿದ್ರೆ ಕೆಲಸ ಬೇಗ ಆಗುತ್ತೆ.
4. ಲಾಸ್ಟ್ ಬಟ್ ನಾಟ್ ಲೀಸ್ಟ್ (Important Tips)
- ನಿಮ್ಮ ಕಾರ್ಡ್ಗೆ e-KYC ಆಗಿದ್ಯಾ ಅಂತ ಒಮ್ಮೆ ಚೆಕ್ ಮಾಡ್ಕೊಳ್ಳಿ.
- ಕೆಲವೊಮ್ಮೆ ಗವರ್ನಮೆಂಟ್ ವೆಬ್ಸೈಟ್ನಲ್ಲಿ Server Issues ಇರುತ್ತೆ, ಆಗ ಪೇಷನ್ಸ್ ಇರಲಿ.
- ಸೇವಾ ಕೇಂದ್ರಗಳಲ್ಲಿ ನಿಗದಿಪಡಿಸಿದ Service Charge ಮಾತ್ರ ಕೊಡಿ.
ಸಣ್ಣ ತಪ್ಪು ಅಂತ ಇಗ್ನೋರ್ ಮಾಡಬೇಡಿ, ಮುಂದೆ ಗವರ್ನಮೆಂಟ್ ಬೆನಿಫಿಟ್ಸ್ ತಗೊಳ್ಳುವಾಗ ಪ್ರಾಬ್ಲಮ್ ಆಗಬಹುದು. ಹಾಗಾಗಿ ಇವತ್ತೇ ಇವನ್ನ ಚೆಕ್ ಮಾಡ್ಕೊಂಡು ಸರಿಪಡಿಸಿಕೊಳ್ಳಿ.
Ahara.karnataka.gov.in ಅಧಿಕೃತ ಜಾಲತಾಣ ಬೇಟಿ ಮಾಡಿ. ಇಲ್ಲಿ ಒತ್ತಿರಿ.