ನಿಮ್ಮ ಬೆಳೆ ವಿಮೆ ಸ್ಟೇಟಸ್( bele vime status ) ಮೊಬೈಲ್ನಲ್ಲೇ ಚೆಕ್ ಮಾಡಿ, ಇಲ್ಲಿದೆ step by step ಮಾಹಿತಿ.
ರೈತರಿಗೆ ಮಳೆ ಮತ್ತು ಬೆಳೆ ಎರಡೂ ಲಾಟರಿ ಇದ್ದಂತೆ. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋದಾಗ ನಮ್ಮ ಕೈ ಹಿಡಿಯುವುದು ಈ Crop Insurance. ಆದರೆ, ವಿಮೆ ಕಟ್ಟಿದ ಮೇಲೆ ಅದರ ಸ್ಟೇಟಸ್ ಏನಾಯ್ತು? ಹಣ ಮಂಜೂರಾಗಿದೆಯೇ ಅಥವಾ ಇಲ್ಲವೇ? ಎಂಬ ಗೊಂದಲ ಅನೇಕರಲ್ಲಿದೆ.
Bele vime status ಮೊಬೈಲ್ ನಲ್ಲೇ check ಮಾಡುವ ಸರಳ ವಿಧಾನ.

ಈಗ ನೀವು ಆಫೀಸ್ ಅಲೆದಾಡುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ Smart Phone ಮೂಲಕವೇ ಕೆಲವೇ ನಿಮಿಷಗಳಲ್ಲಿ ಈ ಮಾಹಿತಿಯನ್ನು ಪಡೆಯಬಹುದು. ಅದು ಹೇಗೆ ಎಂಬ ಹಂತ ಹಂತದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ. 2025-26 ಖಾರಿಫ್ ಬೆಳೆ ವಿಮೆ ಜಮಾ , ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.
ಮೊಬೈಲ್ನಲ್ಲಿ ಚೆಕ್ ಮಾಡುವುದು ಹೇಗೆ? (Step-by-Step Guide)
ನೀವು ಕರ್ನಾಟಕದವರಾಗಿದ್ದರೆ, ‘ಸಂರಕ್ಷಣೆ’ (Samrakshane) ಪೋರ್ಟಲ್ ಅತ್ಯಂತ ಸುಲಭವಾದ ದಾರಿ.
1. ವೆಬ್ಸೈಟ್ಗೆ ಭೇಟಿ ನೀಡಿ: ಮೊದಲು ನಿಮ್ಮ ಮೊಬೈಲ್ ಬ್ರೌಸರ್ನಲ್ಲಿ (Google Chrome) Samrakshane ಪೋರ್ಟಲ್ ಓಪನ್ ಮಾಡಿ.
2. ವರ್ಷ ಮತ್ತು ಋತು ಆಯ್ಕೆ ಮಾಡಿ: ಅಲ್ಲಿ ನಿಮ್ಮ ಬೆಳೆ ವಿಮೆಗೆ ಸಂಬಂಧಿಸಿದ Year (ಉದಾಹರಣೆಗೆ 2024-25) ಮತ್ತು Season(Kharif ಅಥವಾ Rabi) ಅನ್ನು ಸೆಲೆಕ್ಟ್ ಮಾಡಿ.
Crop insurance : ಬೆಳೆ ವಿಮೆ ಹಣ ಬರ್ತಾ ಇಲ್ವಾ? ಇಲ್ಲಿದೆ ಅಸಲಿ ಕಾರಣ ಮತ್ತು ಪರಿಹಾರ.
3 Check Status ಮೇಲೆ ಕ್ಲಿಕ್ ಮಾಡಿ: ಮುಖಪುಟದಲ್ಲಿರುವ ‘Check Status‘ ಅಥವಾ ‘Farmer‘ ವಿಭಾಗಕ್ಕೆ ಹೋಗಿ.
4 ವಿವರಗಳನ್ನು ನಮೂದಿಸಿ: ನಿಮ್ಮ ಬಳಿ ಇರುವ ಈ ಕೆಳಗಿನ ಯಾವುದಾದರೂ ಒಂದು ಮಾಹಿತಿಯನ್ನು ನೀಡಿ:
- Application Reference Number (ಅರ್ಜಿ ಸಂಖ್ಯೆ)
- Mobile Number (ನೋಂದಾಯಿತ ಮೊಬೈಲ್ ಸಂಖ್ಯೆ)
- Aadhar Number (ಆಧಾರ್ ಸಂಖ್ಯೆ)
5. OTP ಅಥವಾ ಕ್ಯಾಪ್ಚಾ ಎಂಟರ್ ಮಾಡಿ: ಭದ್ರತೆಗಾಗಿ ಕೇಳುವ ಸಂಖ್ಯೆಯನ್ನು ಟೈಪ್ ಮಾಡಿ ‘Search‘ ನೀಡಿ.
ಈಗ ನಿಮ್ಮ ಸ್ಕ್ರೀನ್ ಮೇಲೆ ನಿಮ್ಮ ಬೆಳೆ ವಿಮೆಯ ಸಂಪೂರ್ಣ Current Status ಕಾಣಿಸಿಕೊಳ್ಳುತ್ತದೆ. ನಿಮ್ಮ ಅರ್ಜಿ Approve ಆಗಿದೆಯೇ? ಅಥವಾ Payment ಇನ್ನೂ ಪ್ರಕ್ರಿಯೆಯಲ್ಲಿದೆಯೇ ಎಂಬುದು ಕ್ಲಿಯರ್ ಆಗಿ ತಿಳಿಯುತ್ತದೆ.
ಪ್ರಮುಖ ಅಂಶಗಳು (Quick Tips)
• Bank Account link: ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ (NPCI Mapping), ಇಲ್ಲದಿದ್ದರೆ ಹಣ ಕ್ರೆಡಿಟ್ ಆಗಲು ತೊಂದರೆಯಾಗಬಹುದು.
• Application Receipt: ವಿಮೆ ಕಟ್ಟಿದಾಗ ಸಿಗುವ ರಸೀದಿಯನ್ನು ಯಾವಾಗಲೂ ಜೋಪಾನವಾಗಿಡಿ. ಅದರಲ್ಲಿರುವ Reference Number ಬಹಳ ಮುಖ್ಯ.
• Official Apps: ನೀವು ಬೇಕಿದ್ದರೆ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ‘Crop Insurance‘ ಅಧಿಕೃತ ಆಪ್ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.
ಗಮನಿಸಿ: ಒಂದು ವೇಳೆ ನಿಮ್ಮ ಸ್ಟೇಟಸ್ನಲ್ಲಿ ‘Rejected’ ಎಂದು ಬಂದರೆ, ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (Raitha Samparka Kendra) ಅಥವಾ ಬ್ಯಾಂಕ್ ಅನ್ನು ಸಂಪರ್ಕಿಸಿ ಕಾರಣ ತಿಳಿದುಕೊಳ್ಳಿ.
Bele vime status check direct link : ಇಲ್ಲಿ ಒತ್ತಿರಿ