📝 ದ್ವಿತೀಯ ಪಿಯುಸಿ ಪರೀಕ್ಷೆ 2026: ವಿದ್ಯಾರ್ಥಿಗಳ ಗಮನಕ್ಕೆ…
ಹಲೋ ಗೆಳೆಯರೇ, ದ್ವಿತೀಯ ಪಿಯುಸಿ ಎಂಬುದು ಜೀವನದ ಒಂದು ಪ್ರಮುಖ ಘಟ್ಟ. ನಾಳೆಯಿಂದ ಪರೀಕ್ಷೆ ಆರಂಭವಾಗುತ್ತಿರುವುದರಿಂದ ಸಹಜವಾಗಿಯೇ ಸ್ವಲ್ಪ ಆತಂಕ ಇರುತ್ತದೆ.
ಆದರೆ ನೆನಪಿಡಿ, ಇದು ಕೇವಲ ಒಂದು ಪರೀಕ್ಷೆ ಅಷ್ಟೇ. ಪರೀಕ್ಷೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪಕ್ಕಾ ಮಾಹಿತಿ ಇಲ್ಲಿದೆ.

📅 ಪರೀಕ್ಷೆಯ ವೇಳಾಪಟ್ಟಿ ಮತ್ತು ಸಮಯ.
• ಪ್ರಾರಂಭ: ಫೆಬ್ರವರಿ 28, 2026.
• ಅಂತ್ಯ: ಮಾರ್ಚ್ 20, 2026.
• ಸಮಯ: ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ.
ಟಿಪ್: ಪ್ರಶ್ನೆ ಪತ್ರಿಕೆ ಓದಲು ಮೊದಲ 15 ನಿಮಿಷ ಸಿಗುತ್ತದೆ, ಅದನ್ನು ಸರಿಯಾಗಿ ಬಳಸಿಕೊಳ್ಳಿ.
🚌 ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪ್ರಯಾಣ
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸರ್ಕಾರ ಒಂದು ದೊಡ್ಡ ರಿಲೀಫ್ ನೀಡಿದೆ.
Karnataka 2nd puc exam 2026 : ಪ್ರಾಕ್ಟಿಕಲ್ ಪರೀಕ್ಷೆ ವೇಳಾಪಟ್ಟಿ ಪ್ರಕಟ.
ಪರೀಕ್ಷಾ ದಿನಗಳಂದು ನಿಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ವಾಪಸ್ ಬರಲು KSRTC ಮತ್ತು BMTC ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಕೇವಲ ನಿಮ್ಮ ಹಾಲ್ ಟಿಕೆಟ್ (Hall Ticket) ತೋರಿಸಿದರೆ ಸಾಕು, ಕಂಡಕ್ಟರ್ ನಿಮಗೆ ಟಿಕೆಟ್ ಕೇಳುವುದಿಲ್ಲ.
✍️ ಈ ಬಾರಿ ಪಾಸಿಂಗ್ ರೂಲ್ಸ್ ಬದಲಾಗಿದೆ!
ಈ ವರ್ಷದಿಂದ ರಾಜ್ಯ ಸರ್ಕಾರ ಒಂದು ಮಹತ್ವದ ಬದಲಾವಣೆ ಮಾಡಿದೆ:
ಪಾಸಿಂಗ್ ಮಾರ್ಕ್ಸ್: ಮೊದಲು 35 ಅಂಕಗಳಿರಬೇಕಿತ್ತು, ಆದರೆ ಈಗ ಅದನ್ನು ಶೇ. 30 ಕ್ಕೆ ಇಳಿಸಲಾಗಿದೆ. ಅಂದರೆ 100 ಕ್ಕೆ 30 ಅಂಕ ಪಡೆದರೆ ಸಾಕು, ನೀವು ಪಾಸ್!
SSLC EXAM 2026 : ಪರೀಕ್ಷಾ ವೇಳಾಪಟ್ಟಿ ಪ್ರಕಟ, ಡೌನ್ಲೋಡ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.
ಇದು ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಕೈಗೊಂಡ ನಿರ್ಧಾರ.
🚫 ಪರೀಕ್ಷಾ ಕೇಂದ್ರದಲ್ಲಿ ಏನು ಮಾಡಬಾರದು?
• ಮೊಬೈಲ್ ಫೋನ್, mobile phones, ಸ್ಮಾರ್ಟ್ ವಾಚ್ಗಳು ಮತ್ತು ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೆ ಬಿಡುವುದಿಲ್ಲ.
• ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಇರುತ್ತದೆ, ಅಂದರೆ ಗುಂಪು ಸೇರುವಂತಿಲ್ಲ.
• ಜಿರಾಕ್ಸ್ ಅಂಗಡಿಗಳು ಪರೀಕ್ಷಾ ಸಮಯದಲ್ಲಿ ಮುಚ್ಚಿರುತ್ತವೆ.
💡 ಪರೀಕ್ಷೆಗೆ ಹೋಗುವ ಮುನ್ನ ಕೆಲವು ಕಿವಿಮಾತು:
1 ಹಾಲ್ ಟಿಕೆಟ್ ಮರೆಯಬೇಡಿ: ಇಂದು ರಾತ್ರಿಯೇ ನಿಮ್ಮ ಬ್ಯಾಗ್ನಲ್ಲಿ ಹಾಲ್ ಟಿಕೆಟ್ ಇದೆಯೇ ಎಂದು ಎರಡು ಬಾರಿ ಚೆಕ್ ಮಾಡಿಕೊಳ್ಳಿ.
2 ಬೇಗ ಹೊರಡಿ: ಟ್ರಾಫಿಕ್ ಅಥವಾ ಬಸ್ ಸಮಸ್ಯೆ ತಪ್ಪಿಸಲು ಕನಿಷ್ಠ 45 ನಿಮಿಷ ಮೊದಲೇ ಕೇಂದ್ರಕ್ಕೆ ತಲುಪಿ.
3 ಆರೋಗ್ಯ ಮುಖ್ಯ: ಪರೀಕ್ಷೆಯ ಟೆನ್ಷನ್ನಲ್ಲಿ ಊಟ ಬಿಡಬೇಡಿ, ಸಾಕಷ್ಟು ನೀರು ಕುಡಿಯಿರಿ.
“ಪರೀಕ್ಷೆ ಎಂಬುದು ನಿಮ್ಮ ಜ್ಞಾನದ ಅಳತೆಗೋಲಷ್ಟೇ, ನಿಮ್ಮ ವ್ಯಕ್ತಿತ್ವದ್ದಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.”
My self malatesha from Karnataka state, india. I have well experienced in content writing since 2021, we publish daily news.