ಕರ್ನಾಟಕ ರಾಜ್ಯದ 2025 ಮತ್ತು 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ Karnataka 2nd puc exam 2026 ವೇಳಾಪಟ್ಟಿಯನ್ನು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಕಟಣೆ ಮಾಡಿದೆ.
ಸೆಕೆಂಡ್ ಪಿಯುಸಿ ಅಥವಾ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗಾಗಲೇ ಮಂಡಳಿಯು ಪ್ರಕಟಣೆ ಮಾಡಿದ್ದು ಜನವರಿ 27 ರಿಂದ ಫೆಬ್ರವರಿ 2 ವರೆಗೆ ಪರೀಕ್ಷೆಗಳು ನಡೆಯುತ್ತವೆ.

2nd puc exam 2026 : ಪ್ರಾಕ್ಟಿಕಲ್ ಪರೀಕ್ಷೆ ವೇಳಾಪಟ್ಟಿ ಪ್ರಕಟ.
ಇದನ್ನೂ ಓದಿ: SBI ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತಿದೆ! ಈಗಲೇ ಅರ್ಜಿ ಸಲ್ಲಿಸಿ,
ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣವಾದ, kseab.karnataka.gov.in ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
2026ನೇ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳು ಒಂದು ವಾರದ ಅವಧಿಯಲ್ಲಿ ನಡೆಯಲಿದ್ದು, ಈ ಕುರಿತಾಗಿ ಕೆಎಸ್ಇಎಬಿ ಅಧಿಕೃತವಾದ ಸುತ್ತೋಲೆಯನ್ನು ಹೊರಡಿಸಿದೆ.
ಪ್ರಾಕ್ಟಿಕಲ್ ಪರೀಕ್ಷೆ ಪೂರ್ಣ ಆದ ನಂತರ Karnataka 2nd PUC main exam 2026ನೇ ಫೆಬ್ರುವರಿ 28ರಿಂದ ಮಾರ್ಚ್ 17 ತನಕ ನಡೆಯಲಿದೆ. ಈ ಬಾರಿ ಪರೀಕ್ಷೆಗಳ ಮೇಲ್ವಿಚಾರಣೆ ಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತದೆ.
ಆಯಾ ವಿಜ್ಞಾನ ವಿಷಯದ ಒಬ್ಬ ಪ್ರಾಂಶುಪಾಲರನ್ನು ಸಂಯೋಜಿಕರಾಗಿ ಮಾಡಲಾಗುತ್ತದೆ. ಅಲ್ಲದೆ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಟೈಮ್ ಟೇಬಲ್ ಅನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲಾ ಸಮಿತಿ ಅಧಿಕಾರ ವಹಿಸಿರುತ್ತದೆ.
ಈ ಬಾರಿ ಪ್ರಾಕ್ಟಿಕಲ್ ಪರೀಕ್ಷೆಗಳ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಇಎಬಿ ಕಠಿಣವಾಗಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ಜಾಲತಾಣ ಬೇಟಿ ಮಾಡಿ.