LIC policy status ಎಲ್ಐಸಿ ಪಾಲಿಸಿ ಸ್ಟೇಟಸ್: ಮನೆಯಲ್ಲೇ ಕುಳಿತು ಚೆಕ್ ಮಾಡುವುದು ಹೇಗೆ? ನಮ್ಮಲ್ಲಿ ತುಂಬಾ ಜನ ವಿಮೆ ಮಾಡಿಸಿರ್ತೀವಿ, ಪ್ರತಿ ತಿಂಗಳು ಅಥವಾ ವರ್ಷಕ್ಕೊಮ್ಮೆ ದುಡ್ಡು ಕಡ್ತಿರ್ತೀವಿ.
ಆದ್ರೆ ಪಾಲಿಸಿ ಈಗ ಯಾವ ಹಂತದಲ್ಲಿದೆ? ಮುಂದಿನ ಪ್ರೀಮಿಯಂ ಯಾವಾಗ? ಅನ್ನೋದು ಹಲವೊಮ್ಮೆ ಮರೆತು ಹೋಗುತ್ತೆ. ಅದಕ್ಕಾಗಿ ಎಲ್‌ಐಸಿ ಆಫೀಸ್‌ಗೆ ಅಲೆಯೋ ಕಾಲ ಈಗ ಮುಗಿದಿದೆ.

LIC policy status checking method.
ಇದನ್ನೂ ಓದಿ: Caste certificate : ಮೊಬೈಲ್ ನಲ್ಲೇ ಜಾತಿ ಪ್ರಮಾಣ ಪತ್ರ ಪಡೆಯೋದು ಹೇಗೆ? Steps ಇಲ್ಲಿದೆ.
ನಿಮ್ಮ ಕೈಯಲ್ಲೊಂದು ಮೊಬೈಲ್ ಇದ್ರೆ ಸಾಕು, ಒಂದೇ ನಿಮಿಷದಲ್ಲಿ ಎಲ್ಲಾ ಮಾಹಿತಿ ಸಿಗುತ್ತೆ.
ಇದಕ್ಕೆ ಮುಖ್ಯವಾಗಿ ಮೂರು ಸುಲಭ ದಾರಿಗಳಿವೆ:

1. ಎಲ್‌ಐಸಿ ಕಸ್ಟಮರ್ ಪೋರ್ಟಲ್ ಮೂಲಕ (Online Method)ಇದು ಅತ್ಯಂತ ಅಧಿಕೃತ ಮತ್ತು ವಿವರವಾದ ಮಾಹಿತಿ ನೀಡುವ ದಾರಿ.
- ಹಂತ 1: ಎಲ್‌ಐಸಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ: www.licindia.in
- ಹಂತ 2: ಅಲ್ಲಿ ‘Login to Customer Portal’ ಎಂಬ ಆಯ್ಕೆ ಇರುತ್ತೆ, ಅದರ ಮೇಲೆ ಕ್ಲಿಕ್ ಮಾಡಿ.
- ಹಂತ 3: ನೀವು ಮೊದಲೇ ರಿಜಿಸ್ಟರ್ ಆಗಿದ್ರೆ User ID ಮತ್ತು Password ಹಾಕಿ ಲಾಗಿನ್ ಆಗಿ. ಹೊಸಬರಾಗಿದ್ರೆ ‘New User’ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಾಲಿಸಿ ನಂಬರ್ ಮತ್ತು ಡೇಟ್ ಆಫ್ ಬರ್ತ್ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.
- ಹಂತ 4: ಲಾಗಿನ್ ಆದ ಮೇಲೆ ‘Self Policy’ ಸೆಕ್ಷನ್‌ನಲ್ಲಿ ನಿಮ್ಮ ಪಾಲಿಸಿಯ ಪೂರ್ತಿ ಜಾತಕ (ಸ್ಟೇಟಸ್, ಬೋನಸ್, ಮುಂದಿನ ಪಾವತಿ ದಿನಾಂಕ) ಕಾಣಿಸುತ್ತೆ.
2. ಎಸ್‌ಎಮ್‌ಎಸ್ (SMS) ಮೂಲಕ – ಅತಿ ವೇಗದ ದಾರಿ
ಇಂಟರ್ನೆಟ್ ಇಲ್ಲದಿದ್ದರೂ ಪರವಾಗಿಲ್ಲ, ಒಂದು ಮೆಸೇಜ್ ಕಳಿಸಿದ್ರೆ ಸಾಕು.
ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್ ತೆರೆದು ಹೀಗೆ ಟೈಪ್ ಮಾಡಿ:
ASKLIC <POLICY_NUMBER> STAT
ಇದನ್ನು 56767474 ಸಂಖ್ಯೆಗೆ ಕಳಿಸಿ. ತಕ್ಷಣವೇ ನಿಮ್ಮ ಪಾಲಿಸಿ ಚಾಲ್ತಿಯಲ್ಲಿದೆಯೇ ಅಥವಾ ಇಲ್ಲವೇ ಎಂಬ ಮೆಸೇಜ್ ನಿಮಗೆ ವಾಪಸ್ ಬರುತ್ತೆ.
3. ಕೇವಲ ಒಂದು ಫೋನ್ ಕರೆ ಮೂಲಕ
ನೀವು ಎಲ್‌ಐಸಿ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿ ಕೂಡ ಮಾಹಿತಿ ಪಡೆಯಬಹುದು.
New ration card : ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಆರಂಭ, ಈಗಲೇ ಸಲ್ಲಿಸಿ.
ನಂಬರ್: 022-68276827 * ಇದು 24/7 ಲಭ್ಯವಿರುವ ಐವಿಆರ್ (IVR) ಸೇವೆ. ಇಲ್ಲಿ ಕೇಳುವ ಸೂಚನೆಗಳನ್ನು ಅನುಸರಿಸಿ ಪಾಲಿಸಿ ನಂಬರ್ ಒತ್ತಿದರೆ ಸಾಕು.
ಪಾಲಿಸಿ ಸ್ಟೇಟಸ್ ಚೆಕ್ ಮಾಡುವಾಗ ನಿಮ್ಮ ಪಾಲಿಸಿ ಬಾಂಡ್ (Policy Bond) ಕೈಯಲ್ಲಿರಲಿ, ಯಾಕಂದ್ರೆ ಅದರಲ್ಲಿರುವ ಸರಿಯಾದ ಪಾಲಿಸಿ ನಂಬರ್ ಮತ್ತು ಹುಟ್ಟಿದ ದಿನಾಂಕ ಮಾಹಿತಿ ನೀಡಲು ಮುಖ್ಯವಾಗುತ್ತದೆ.
ನಿಮ್ಮ ಪಾಲಿಸಿಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ರೆ ಇವೆಲ್ಲವೂ ತುಂಬಾ ಸುಲಭ ಆಗುತ್ತೆ. ಒಂದು ವೇಳೆ ಲಿಂಕ್ ಆಗಿಲ್ಲ ಅಂದ್ರೆ ಒಮ್ಮೆ ಹತ್ತಿರದ ಎಲ್‌ಐಸಿ ಬ್ರಾಂಚ್‌ಗೆ ಹೋಗಿ ಅಪ್‌ಡೇಟ್ ಮಾಡಿಸಿ ಬನ್ನಿ.
Lic policy status check: ಇಲ್ಲಿ ಒತ್ತಿರಿ.