ನಮಸ್ಕಾರ ಸ್ನೇಹಿತರೇ, ತಹಶೀಲ್ದಾರ್ ಕಚೇರಿಗೆ ಅಲೆಯುವ ಕಾಲ ಮುಗಿಯಿತು: ನಿಮ್ಮ ಮೊಬೈಲ್‌ನಲ್ಲೇ ಜಮೀನಿನ ಪಹಣಿ ( RTC ) ನೋಡುವುದು ಹೇಗೆ? ಇಲ್ಲಿದೆ ಮಾಹಿತಿ.
ನಮ್ಮ ಜಮೀನಿನ ಪಹಣಿ ( RTC ) ಅಥವಾ ಸರ್ವೆ ನಂಬರ್ ವಿವರಗಳನ್ನು ನೋಡಬೇಕೆಂದರೆ ಹಿಂದೆಲ್ಲಾ ಗಂಟೆಗಟ್ಟಲೆ ತಹಶೀಲ್ದಾರ್ ಕಚೇರಿ ಮುಂದೆ ಕಾಯಬೇಕಿತ್ತು ಅಥವಾ ನೆಮ್ಮದಿ ಕೇಂದ್ರಗಳಿಗೆ ಹೋಗಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ.

Survey number ನಲ್ಲಿ ಹೆಸರು ಚೆಕ್ ಮಾಡುವ ವಿಧಾನ.
ಕರ್ನಾಟಕ ಸರ್ಕಾರದ ‘ಭೂಮಿ’ (Bhoomi) ಪೋರ್ಟಲ್ ಸಹಾಯದಿಂದ ನಿಮ್ಮ ಕೈಯಲ್ಲಿರುವ ಮೊಬೈಲ್‌ನಲ್ಲೇ ಕೇವಲ ಎರಡೇ ನಿಮಿಷದಲ್ಲಿ ಎಲ್ಲ ವಿವರಗಳನ್ನು ನೀವೇ ಖುದ್ದಾಗಿ ಚೆಕ್ ಮಾಡಬಹುದು.
ನಿಮ್ಮ ಜಮೀನಿನ ಮಾಲೀಕರು ಯಾರು? ಎಷ್ಟು ವಿಸ್ತೀರ್ಣವಿದೆ? ಸಾಲದ ವಿವರಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಇದನ್ನೂ ಓದಿ: ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರಗಳಿಗೆ ಶೇ. 90ರಷ್ಟು ಸಬ್ಸಿಡಿ! Tractor subsidy scheme
ನಿಮ್ಮ ಮೊಬೈಲ್‌ನಲ್ಲಿ ವಿವರ ಪಡೆಯುವುದು ಹೀಗೆ:
ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಓಪನ್ ಮಾಡಿ rtc.karnataka.gov.in ಎಂದು ಟೈಪ್ ಮಾಡಿ ಸರ್ಚ್ ಮಾಡಿ.
ನಿಮ್ಮ ಊರನ್ನು ಆಯ್ಕೆ ಮಾಡಿ: ವೆಬ್‌ಸೈಟ್ ತೆರೆದ ನಂತರ ಅಲ್ಲಿ ಕೇಳುವ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮದ ಹೆಸರನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.
ಲೇಟೆಸ್ಟ್ ನ್ಯೂಸ್: ಕರ್ನಾಟಕ ಹೊಸ ಪಡಿತರ ಚೀಟಿ (Ration Card) ಅರ್ಜಿ 2026:
ಸರ್ವೆ ನಂಬರ್ ನಮೂದಿಸಿ: ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ. ಒಂದು ವೇಳೆ ನಿಮ್ಮ ಜಮೀನಿಗೆ ‘ಹಿಸ್ಸಾ’ ನಂಬರ್ (ಉದಾಹರಣೆಗೆ: 1/A, 2/B) ಇದ್ದರೆ ಅದನ್ನು ಕೂಡ ಆಯ್ಕೆ ಮಾಡಿ ‘Go‘ ಮೇಲೆ ಕ್ಲಿಕ್ ಮಾಡಿ.
ಮಾಹಿತಿ ಪಡೆದುಕೊಳ್ಳಿ: ಮುಂದೆ ಬರುವ ‘Surnoc‘, ‘Hissa‘, ‘Period‘ ಮತ್ತು ‘Year‘ (ಯಾವ ವರ್ಷದ ಮಾಹಿತಿ ಬೇಕು ಎಂಬುದು) ವಿವರಗಳನ್ನು ಸೆಲೆಕ್ಟ್ ಮಾಡಿ ‘Fetch Details‘ ಕೊಟ್ಟರೆ ಸಾಕು, ಜಮೀನಿನ ಮಾಲೀಕರ ಹೆಸರು ಕಾಣಿಸುತ್ತದೆ.
ಪಹಣಿ ವೀಕ್ಷಿಸಿ (View RTC): ನೀವು ‘View‘ ಬಟನ್ ಒತ್ತಿದರೆ ನಿಮ್ಮ ಜಮೀನಿನ ಪಹಣಿ ಪೂರ್ತಿಯಾಗಿ ಮೊಬೈಲ್ ಪರದೆಯ ಮೇಲೆ ಬರುತ್ತದೆ. ಇದರಲ್ಲಿ ಜಮೀನಿನ ಅಳತೆ, ಯಾವ ಬ್ಯಾಂಕ್‌ನಲ್ಲಿ ಸಾಲವಿದೆ, ಯಾವ ಬೆಳೆ ಬೆಳೆಯಲಾಗಿದೆ ಎಂಬ ಅಷ್ಟೂ ವಿವರಗಳು ಇರುತ್ತವೆ.
ಈ ಆನ್‌ಲೈನ್ ಪಹಣಿಯಿಂದ ನಮಗಾಗುವ ಅನುಕೂಲಗಳೇನು?
ಮಾಲೀಕತ್ವದ ಖಾತ್ರಿ: ಜಮೀನು ಯಾರ ಹೆಸರಿನಲ್ಲಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಸಾಲದ ವಿವರ: ಜಮೀನಿನ ಮೇಲೆ ಬ್ಯಾಂಕ್ ಲೋನ್ ಇದೆಯೇ ಅಥವಾ ಜಪ್ತಿಯಾಗಿದೆಯೇ ಎಂಬ ಮಾಹಿತಿ ಸಿಗುತ್ತದೆ.
ಮ್ಯುಟೇಷನ್ ಸ್ಟೇಟಸ್: ನಿಮ್ಮ ಜಮೀನಿನ ಖಾತೆ ಬದಲಾವಣೆ (Mutation) ಪ್ರಕ್ರಿಯೆ ಎಲ್ಲಿದೆ ಎಂದು ತಿಳಿಯಬಹುದು.
ಸಮಯದ ಉಳಿತಾಯ: ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ಮನೆಯಲ್ಲೇ ಕುಳಿತು ಮಾಹಿತಿ ಪಡೆಯಬಹುದು.
ಒಂದು ಸಣ್ಣ ಸೂಚನೆ: ನೀವು ಇದನ್ನು ಕೇವಲ ಮಾಹಿತಿಗಾಗಿ ಬಳಸುತ್ತಿದ್ದರೆ ಫ್ರೀಯಾಗಿ ನೋಡಬಹುದು. ಆದರೆ ಸರ್ಕಾರಿ ಕೆಲಸಕ್ಕೆ ಅಥವಾ ಬ್ಯಾಂಕ್ ಲೋನ್ ಗೆ ಬೇಕಿದ್ದರೆ, ಸ್ವಲ್ಪ ಹಣ ಪಾವತಿಸಿ ಡಿಜಿಟಲ್ ಸಹಿ ಇರುವ ಪಹಣಿಯನ್ನು ಇದೇ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ನಿಮ್ಮ ಸುತ್ತಮುತ್ತಲಿನ ರೈತ ಬಾಂಧವರಿಗೆ ಈ ಮಾಹಿತಿ ತಿಳಿಯದಿದ್ದರೆ ಅವರಿಗೆ ಇದನ್ನು ಹಂಚಿಕೊಳ್ಳಿ. ಅವರಿಗೆ ತುಂಬಾ ಅನುಕೂಲವಾಗುತ್ತದೆ.
Rtc name checking link : https://www.landrecords.karnataka.gov.in/service2/RTC.aspx