ವಾಟ್ಸಾಪ್ ಇತ್ತೀಚೆಗೆ ತನ್ನ ಭದ್ರತೆಯನ್ನು ಹೆಚ್ಚಿಸಲು ‘ಸಿಮ್ ಬೈಂಡಿಂಗ್’ ( SIM Binding ) ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.
ಇದು ಮೇಲ್ನೋಟಕ್ಕೆ ಸಾಮಾನ್ಯ ಎನಿಸಿದರೂ, ಬಳಕೆದಾರರ ಖಾತೆಗಳ ಸುರಕ್ಷತೆಯ ದೃಷ್ಟಿಯಿಂದ ಬಹಳ ದೊಡ್ಡ ಹೆಜ್ಜೆ.

Sim binding ಮಾಡಿಸದೆ ಇದ್ರೆ ವಾಟ್ಸಾಪ್ ವರ್ಕ್ ಆಗಲ್ಲ.
ಈ ಹೊಸ ಬದಲಾವಣೆ ಏನು, ಇದರಿಂದ ನಮಗೇನು ಲಾಭ ಅನ್ನೋದರ ಬಗ್ಗೆ ಸರಳವಾದ ಲೇಖನ ಇಲ್ಲಿದೆ:
ಇದನ್ನೂ ಓದಿ. Hero company ಇಂದ ಮೊಟ್ಟ ಮೊದಲ electric bike ಬಿಡುಗಡೆ. 180km ಮೈಲೇಜ್
ಏನಿದು ವಾಟ್ಸಾಪ್ ಸಿಮ್ ಬೈಂಡಿಂಗ್?
ಇಲ್ಲಿಯವರೆಗೆ ನಾವು ವಾಟ್ಸಾಪ್ ಅನ್ನು ಯಾವುದೇ ಫೋನ್ನಲ್ಲಿ ಬಳಸಬೇಕೆಂದರೆ ಕೇವಲ ಒಂದು OTP (One Time Password)ಸಾಕಿತ್ತು. ಅಂದರೆ, ನಿಮ್ಮ ಸಿಮ್ ಕಾರ್ಡ್ ( sim card )ಒಂದು ಫೋನ್ನಲ್ಲಿದ್ದು, ನೀವು ಮತ್ತೊಂದು ಫೋನ್ನಲ್ಲಿ ವಾಟ್ಸಾಪ್ ಲಾಗಿನ್ ಮಾಡಲು ಸಾಧ್ಯವಿತ್ತು.
ಆದರೆ ‘ಸಿಮ್ ಬೈಂಡಿಂಗ್’ ನಿಯಮ ಬಂದ ಮೇಲೆ, ನೀವು ಯಾವ ಫೋನ್ನಲ್ಲಿ ವಾಟ್ಸಾಪ್ ಬಳಸಲು ಬಯಸುತ್ತೀರೋ, ಅದೇ ಫೋನ್ನಲ್ಲಿ ನಿಮ್ಮ ಅಧಿಕೃತ ಸಿಮ್ ಕಾರ್ಡ್ ಇರುವುದು ಕಡ್ಡಾಯ.
ಸಿಮ್ ಇಲ್ಲದ ಫೋನ್ನಲ್ಲಿ ಇನ್ಮುಂದೆ ಅಷ್ಟು ಸುಲಭವಾಗಿ ವಾಟ್ಸಾಪ್ ಲಾಗಿನ್ ಮಾಡಲು ಸಾಧ್ಯವಾಗುವುದಿಲ್ಲ.
ಇದು ಯಾಕೆ ಅಷ್ಟು ಮುಖ್ಯ? Why it is important?
ಈ ನಿಯಮವನ್ನು ತರುತ್ತಿರುವುದಕ್ಕೆ ಮುಖ್ಯ ಕಾರಣ ಸೈಬರ್ ವಂಚನೆಗಳನ್ನು ತಡೆಯುವುದು. ಇತ್ತೀಚಿನ ದಿನಗಳಲ್ಲಿ ಸ್ಕ್ಯಾಮರ್ಗಳು ಬೇರೆಯವರ ಫೋನ್ ನಂಬರ್ ಬಳಸಿ ವಾಟ್ಸಾಪ್ ಲಾಗಿನ್ ಮಾಡಿ, ಅವರ ಹೆಸರಲ್ಲಿ ಹಣ ಕೇಳುವ ಅಥವಾ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಸಿಮ್ ಬೈಂಡಿಂಗ್ನಿಂದ ಆಗುವ ಪ್ರಯೋಜನಗಳು: benefits of sim binding.
• ಖಾತೆ ಹೈಜಾಕ್ ತಡೆಯುವುದು: ನಿಮ್ಮ ಸಿಮ್ ಕಾರ್ಡ್ ನಿಮ್ಮ ಬಳಿಯೇ ಇರುವುದರಿಂದ, ಬೇರೆ ಯಾರೋ ಎಲ್ಲೋ ಕುಳಿತು ನಿಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ.
• ಫಿಶಿಂಗ್ ದಾಳಿಗೆ ಬ್ರೇಕ್: ಓಟಿಪಿ ಕದ್ದರೂ ಸಹ, ಸಿಮ್ ಆ ಫೋನ್ನಲ್ಲಿ ಇಲ್ಲದಿದ್ದರೆ ಲಾಗಿನ್ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.
• ಹೆಚ್ಚುವರಿ ಭದ್ರತೆ: ಇದು ನಿಮ್ಮ ವಾಟ್ಸಾಪ್ ಖಾತೆಗೆ ಒಂದು ‘ಡಿಜಿಟಲ್ ಲಾಕ್’ ಇದ್ದಂತೆ.
ಬಳಕೆದಾರರ ಮೇಲೆ ಇದರ ಪರಿಣಾಮವೇನು?
ನಮಗೆ ಸ್ವಲ್ಪ ಕಿರಿಕಿರಿ ಅನ್ನಿಸಿದರೂ, ಸುರಕ್ಷತೆಯ ದೃಷ್ಟಿಯಿಂದ ಇದು ಅನಿವಾರ್ಯ.
1. ಹೊಸ ಫೋನ್ ಬದಲಾಯಿಸುವಾಗ: ನೀವು ಹೊಸ ಫೋನ್ ಖರೀದಿಸಿದಾಗ, ಹಳೆಯ ಫೋನ್ನಿಂದ ಸಿಮ್ ಕಿತ್ತು ಹೊಸ ಫೋನ್ಗೆ ಹಾಕಿದ ನಂತರವೇ ವಾಟ್ಸಾಪ್ ಆಕ್ಟಿವೇಟ್ ಆಗುತ್ತದೆ.
2. ಎರಡು ಫೋನ್ ಬಳಸುವವರಿಗೆ: ನೀವು ಒಂದು ಫೋನ್ನಲ್ಲಿ ಸಿಮ್ ಇಟ್ಟು, ಮತ್ತೊಂದು ವೈ-ಫೈ ಫೋನ್ನಲ್ಲಿ ವಾಟ್ಸಾಪ್ ಬಳಸುತ್ತಿದ್ದರೆ, ಈ ನಿಯಮ ಅನ್ವಯವಾದ ಮೇಲೆ ಕೆಲವು ತಾಂತ್ರಿಕ ಬದಲಾವಣೆಗಳನ್ನು ಎದುರಿಸಬೇಕಾಗಬಹುದು.
(ಆದರೆ ‘ಲಿಂಕ್ಡ್ ಡಿವೈಸಸ್’ ವೈಶಿಷ್ಟ್ಯವು ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ಗಳಿಗೆ ಮುಂದುವರಿಯುವ ಸಾಧ್ಯತೆಯಿದೆ).
ತಂತ್ರಜ್ಞಾನ ಬೆಳೆದಂತೆ ಕಳ್ಳರೂ ಸ್ಮಾರ್ಟ್ ಆಗುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ವಾಟ್ಸಾಪ್ ತರುತ್ತಿರುವ ಈ ‘ಸಿಮ್ ಬೈಂಡಿಂಗ್‘ ನಿಜಕ್ಕೂ ಸ್ವಾಗತಾರ್ಹ. ನಿಮ್ಮ ಖಾಸಗಿ ಮಾಹಿತಿ ಮತ್ತು ಸಂಭಾಷಣೆಗಳು ಸುರಕ್ಷಿತವಾಗಿರಬೇಕೆಂದರೆ ಇಂತಹ ಸಣ್ಣಪುಟ್ಟ ಬದಲಾವಣೆಗಳಿಗೆ ನಾವು ಒಗ್ಗಿಕೊಳ್ಳುವುದು ಒಳ್ಳೆಯದು.
Mobile ban : ಎಲ್ಲಾ ಶಾಲಾ ಮಕ್ಕಳಿಗೇ ನ್ಯೂಸ್! ಇನ್ಮುಂದೆ ಶಾಲೆಯಲ್ಲಿ ಮೊಬೈಲ್ ಬ್ಯಾನ್!