Term Insurance: ನಿಮ್ಮ ಕುಟುಂಬದ Future ಗೆ ನೀವು ನೀಡುವ Best Gift. ಜೀವನ ಅನ್ನೋದು ಒಂದು unpredictable ಜರ್ನಿ. ಇವತ್ತು ನಾವಿರ್ತೀವಿ, ನಾಳೆ ಏನಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ.
“ನಾನಿರೋವರೆಗೂ ನನ್ನ Family ನ ಚೆನ್ನಾಗಿ ನೋಡ್ಕೊತೀನಿ” ಅನ್ನೋ ಕಾನ್ಫಿಡೆನ್ಸ್ ಎಲ್ಲರಿಗೂ ಇರುತ್ತೆ.

ಇದನ್ನೂ ಓದಿ: ಭೂ ಒಡೆತನ ಯೋಜನೆ : ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ ₹12.50 ಲಕ್ಷ ಸಬ್ಸಿಡಿ
Term insurance : ಟರ್ಮ್ ಇನ್ಸೂರೆನ್ಸ್ ಅಂದ್ರೆ ಏನು? ಯಾಕೆ ಮಾಡಿಸಬೇಕು? ಇಲ್ಲಿದೆ ಮಾಹಿತಿ.
ಆದ್ರೆ, ಒಂದು ವೇಳೆ ನಮಗೆ ಏನಾದ್ರೂ ಆದ್ರೆ? ನಮ್ಮನ್ನು ನಂಬಿರೋ ಹೆಂಡತಿ, ಮಕ್ಕಳು ಅಥವಾ ಪೋಷಕರ ಪರಿಸ್ಥಿತಿ ಏನು? ಈ ಒಂದು ಪ್ರಶ್ನೆಗೆ ಸಿಗೋ ಶಕ್ತಿಶಾಲಿ ಉತ್ತರವೇ Term Insurance.
ಏನಿದು Term Insurance?
ಟರ್ಮ್ Insurance ಅನ್ನೋದು ಒಂದು Pure Life Cover. ಇಲ್ಲಿ ನೀವು ಒಂದು ನಿರ್ದಿಷ್ಟ ಅವಧಿಗೆ (Policy Term) ಒಂದು ಸಣ್ಣ ಮೊತ್ತದ ಹಣವನ್ನು Premium ಆಗಿ ಪಾವತಿಸುತ್ತೀರಿ.
ಒಂದು ವೇಳೆ ಆ ಅವಧಿಯೊಳಗೆ ಪಾಲಿಸಿದಾರರಿಗೆ ಏನಾದರೂ ಅನಾಹುತ ಸಂಭವಿಸಿದರೆ, ಇನ್ಶೂರೆನ್ಸ್ ಕಂಪನಿಯು ಆ ದೊಡ್ಡ ಮೊತ್ತದ ಹಣವನ್ನು (Sum Assured) ನಿಮ್ಮ ಕುಟುಂಬಕ್ಕೆ ನೀಡುತ್ತದೆ.
ಇದು ಯಾವುದೇ Investment ಪ್ಲಾನ್ ಅಲ್ಲ, ಇದೊಂದು ಪಕ್ಕಾ Financial Security.
ತಾಜಾ ಸುದ್ದಿ: Gruha lakshmi 25th installment |ಗೃಹಲಕ್ಷ್ಮಿ 25ನೇ ಕಂತಿನ ಹಣದ ಜಮಾ ಆಗುವ ಕುರಿತು ಅಪ್ಡೇಟ್ ಇಲ್ಲಿದೆ.
📌 Term Insurance ಯಾಕೆ ಪ್ರತಿಯೊಬ್ಬರಿಗೂ Mandatory?
Low Premium, High Cover: ಬೇರೆ ಯಾವುದೇ ಇನ್ಶೂರೆನ್ಸ್ ಪ್ಲಾನ್ಗೆ ಹೋಲಿಸಿದ್ರೆ ಇಲ್ಲಿ ಪ್ರೀಮಿಯಂ ತುಂಬಾನೇ ಕಡಿಮೆ. ಉದಾಹರಣೆಗೆ, ಒಬ್ಬ 25-30 ವರ್ಷದ ವ್ಯಕ್ತಿ ಕೇವಲ ತಿಂಗಳಿಗೆ ಸಾವಿರ ರೂಪಾಯಿ ಆಸುಪಾಸಿನಲ್ಲಿ 1 Crore ವರೆಗೂ ಲೈಫ್ ಕವರ್ ಪಡೆಯಬಹುದು.
To Clear Debts (ಸಾಲದ ಹೊರೆ): ನೀವು ಹೋಮ್ ಲೋನ್, ಕಾರ್ ಲೋನ್ ಅಥವಾ ಪರ್ಸನಲ್ ಲೋನ್ ತಗೊಂಡಿದ್ರೆ, ನಿಮ್ಮ ಅನುಪಸ್ಥಿತಿಯಲ್ಲಿ ಆ ಸಾಲದ ಹೊರೆ ಫ್ಯಾಮಿಲಿ ಮೇಲೆ ಬೀಳಬಾರದು ಅಂದ್ರೆ ಟರ್ಮ್ ಪ್ಲಾನ್ ಇರಲೇಬೇಕು.
Children’s Future: ನಿಮ್ಮ ಮಕ್ಕಳ Education ಮತ್ತು ಮದುವೆ ಯಾವುದೇ ಅಡೆತಡೆಯಿಲ್ಲದೆ ನಡೆಯಲು ಇದು ಆರ್ಥಿಕ ಭದ್ರತೆ ನೀಡುತ್ತೆ.
ಉಪಯುಕ್ತ ಮಾಹಿತಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ( POMIS ): ಪ್ರತಿ ತಿಂಗಳು ಫಿಕ್ಸ್ಡ್ ಆದಾಯ ಪಡೆಯಲು ಇಲ್ಲಿದೆ ದಾರಿ!
Tax Benefits: ನೀವು ಕಟ್ಟೋ ಪ್ರೀಮಿಯಂ ಮೇಲೆ Section 80C ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ವಿನಾಯಿತಿ ಕೂಡ ಸಿಗುತ್ತೆ.
✅ ಒಂದು Important ಪಾಯಿಂಟ್: No Survival Benefit!
ಬಹಳ ಜನರಿಗೆ ಇರುವ ದೊಡ್ಡ ಕನ್ಫ್ಯೂಷನ್ ಅಂದ್ರೆ – “ಪಾಲಿಸಿ ಮುಗಿದ ಮೇಲೆ ನಾನೇನಾದ್ರೂ ಆರಾಮಾಗಿದ್ರೆ ನನ್ನ ದುಡ್ಡು ವಾಪಸ್ ಬರುತ್ತಾ?” ಅಂತ.
ನೋಡಿ, ಟರ್ಮ್ ಇನ್ಶೂರೆನ್ಸ್ನಲ್ಲಿ Survival Benefit ಇರೋದಿಲ್ಲ (ಅಂದ್ರೆ ಹಣ ವಾಪಸ್ ಸಿಗಲ್ಲ). ಇದು ಕೇವಲ ರಿಸ್ಕ್ ಕವರ್ ಮಾಡೋ ಪ್ಲಾನ್.
ನಾವು ಕಾರಿಗೆ ಇನ್ಶೂರೆನ್ಸ್ ಮಾಡಿಸೋದು ಆಕ್ಸಿಡೆಂಟ್ ಆದ್ರೆ ಕ್ಲೈಮ್ ಮಾಡೋಕೆ ಅಲ್ವಾ? ಆಕ್ಸಿಡೆಂಟ್ ಆಗ್ಲಿಲ್ಲ ಅಂದ್ರೆ ದುಡ್ಡು ಬರಲ್ಲ ಅಂತ ಬೇಜಾರ್ ಮಾಡ್ಕೊತೀವಾ? ಇಲ್ಲ. ಅದೇ ರೀತಿ ಇಲ್ಲಿಯೂ ಅಷ್ಟೇ, ನಾವು ಚೆನ್ನಾಗಿದ್ದೀವಿ ಅಂದ್ರೆ ಅದೇ ದೊಡ್ಡ ಲಾಭ!
✅ ಪಾಲಿಸಿ ತಗೋವಾಗ ಇವುಗಳನ್ನು Check ಮಾಡಿ:
Claim Settlement Ratio (CSR): ಕಂಪನಿ ಎಷ್ಟು ಪರ್ಸೆಂಟ್ ಕ್ಲೈಮ್ಗಳನ್ನು ಅಪ್ರೂವ್ ಮಾಡಿದೆ ಅಂತ ನೋಡಿ (95% ಕ್ಕಿಂತ ಜಾಸ್ತಿ ಇದ್ರೆ ಬೆಸ್ಟ್).
Riders: ಪಾಲಿಸಿ ಜೊತೆಗೆ Accidental Death Benefit ಅಥವಾ Critical Illness ನಂತಹ ಎಕ್ಸ್ಟ್ರಾ ಬೆನಿಫಿಟ್ಗಳನ್ನು ಆಡ್ ಮಾಡಿಕೊಳ್ಳಿ.
Disclose Everything: ವಿಮೆ ಮಾಡುವಾಗ ನಿಮ್ಮ ಸ್ಮೋಕಿಂಗ್ ಅಥವಾ ಡ್ರಿಂಕಿಂಗ್ ಹ್ಯಾಬಿಟ್ಸ್ ಬಗ್ಗೆ ಸುಳ್ಳು ಹೇಳಬೇಡಿ. ಇಲ್ಲದಿದ್ದರೆ ಮುಂದೆ ಕ್ಲೈಮ್ ಸಿಗುವಾಗ ಪ್ರಾಬ್ಲಮ್ ಆಗಬಹುದು.
ಸಾವನ್ನು ನಾವು ತಡೆಯಲು ಸಾಧ್ಯವಿಲ್ಲ, ಆದ್ರೆ ನಮ್ಮ ಫ್ಯಾಮಿಲಿ ಆರ್ಥಿಕವಾಗಿ ಬೀದಿಗೆ ಬರೋದನ್ನ ಖಂಡಿತಾ ತಡೆಯಬಹುದು.
ನೀವು ಇವತ್ತೇ ಮಾಡುವ ಒಂದು ಸಣ್ಣ ಇನ್ವೆಸ್ಟ್ಮೆಂಟ್, ನಿಮ್ಮ ಫ್ಯಾಮಿಲಿಯ ನಾಳಿನ ನೆಮ್ಮದಿಗೆ ಕಾರಣವಾಗುತ್ತೆ.
My self malatesha from Karnataka state, india. I have well experienced in content writing since 2021, we publish daily news.