Gruha lakshmi 25th installment |ಗೃಹಲಕ್ಷ್ಮಿ 25ನೇ ಕಂತಿನ ಹಣದ ಜಮಾ ಆಗುವ ಕುರಿತು , ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿದೆ.

Gruha lakshmi 25th installment
ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ಬರುವ ಆ 2,000 ರೂಪಾಯಿಗಳು ಸಣ್ಣ ಪುಟ್ಟ ಖರ್ಚುಗಳಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಥವಾ ಉಳಿತಾಯಕ್ಕೆ ದೊಡ್ಡ ಮಟ್ಟದ ನೆರವು ನೀಡುತ್ತಿರುವುದು ಸುಳ್ಳಲ್ಲ.
ಲೇಟೆಸ್ಟ್ ನ್ಯೂಸ್: Gruha lakshmi status check : ಮೊಬೈಲ್ನಲ್ಲಿ ‘ಗೃಹಲಕ್ಷ್ಮಿ’ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ direct ಲಿಂಕ್.
ಇದನ್ನೂ ಓದಿ: ಮಹಿಳೆಯರಿಗೆ ಗುಡ್ ನ್ಯೂಸ್! ಫೆಬ್ರವರಿ ಮಾರ್ಚ್ ತಿಂಗಳ gruha lakshmi ಹಣ ಜಮಾ.
ಈಗ ಎಲ್ಲರ ಮನದಲ್ಲಿರುವ ಒಂದೇ ಪ್ರಶ್ನೆ— “25ನೇ ಕಂತಿನ ಹಣ ಯಾವಾಗ ಬರುತ್ತೆ?”ವಿಳಂಬಕ್ಕೆ ಕಾರಣವೇನು?
ಸಾಮಾನ್ಯವಾಗಿ ಪ್ರತಿ ತಿಂಗಳು ಹಣ ಸರಿಯಾದ ಸಮಯಕ್ಕೆ ಜಮೆಯಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ತಾಂತ್ರಿಕ ಬದಲಾವಣೆಗಳು, ಕೆವೈಸಿ (KYC) ಅಪ್ಡೇಟ್ ಮತ್ತು ಬ್ಯಾಂಕ್ ಖಾತೆಗಳ ಮ್ಯಾಪಿಂಗ್ ಪ್ರಕ್ರಿಯೆಯಿಂದಾಗಿ ಕೆಲವರಿಗೆ ಹಣ ಬರುವುದು ಸ್ವಲ್ಪ ತಡವಾಗಿದೆ.
ಸರ್ಕಾರವು ಬಾಕಿ ಇರುವ ಕಂತುಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
ಕರ್ನಾಟಕ ಹೊಸ ಪಡಿತರ ಚೀಟಿ (Ration Card) ಅರ್ಜಿ 2026:
ಹಣ ಬರಲು ನೀವು ಮಾಡಬೇಕಾದ ಕೆಲಸಗಳೇನು?
ಹಣ ಇನ್ನೂ ಬಂದಿಲ್ಲ ಎಂದು ಗಾಬರಿಪಡುವ ಮೊದಲು ಈ ಕೆಳಗಿನ ಅಂಶಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.
- ಇ-ಕೆವೈಸಿ (e-KYC): ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇ-ಕೆವೈಸಿ ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ.
- ಆಧಾರ್ ಸೀಡಿಂಗ್: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಮತ್ತು ಅದು ‘Active’ ಸ್ಥಿತಿಯಲ್ಲಿರಬೇಕು.
- ಡಿಬಿಟಿ ಸ್ಟೇಟಸ್: ಸರ್ಕಾರದ ಡಿಬಿಟಿ (DBT) ಕರ್ನಾಟಕ ಆ್ಯಪ್ ಮೂಲಕ ನಿಮ್ಮ ಹಣದ ಸ್ಟೇಟಸ್ ಅನ್ನು ನೀವೇ ಮೊಬೈಲ್ನಲ್ಲಿ ಚೆಕ್ ಮಾಡಬಹುದು.
25ನೇ ಕಂತಿನ ನಿರೀಕ್ಷೆ ಯಾವಾಗ?
ಮೂಲಗಳ ಪ್ರಕಾರ, ಸರ್ಕಾರವು ಬಾಕಿ ಇರುವ ಕಂತುಗಳ ಹಣವನ್ನು ಒಟ್ಟಾಗಿ ಅಥವಾ ಅತಿ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲು ಕ್ರಮ ಕೈಗೊಳ್ಳುತ್ತಿದೆ.
ಈಗಾಗಲೇ ಅರ್ಹರ ಪಟ್ಟಿ ಸಿದ್ಧವಾಗಿದ್ದು, ತಾಂತ್ರಿಕ ಅಡೆತಡೆಗಳು ನಿವಾರಣೆಯಾದ ಬೆನ್ನಲ್ಲೇ ನಿಮ್ಮ ಮೊಬೈಲ್ಗೆ ‘Message‘ ಬರಲಿದೆ.
ಈಗಾಗಲೇ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತಾಗಿ ನೀವೇ ಚೆಕ್ ಮಾಡಿಕೊಳ್ಳಿರಿ.
ಗಮನಿಸಿ: ಯಾವುದೇ ಕಾರಣಕ್ಕೂ ಹಣ ಹಾಕಿಸಿಕೊಡುತ್ತೇವೆ ಎಂದು ಬರುವ ಅಪರಿಚಿತ ಕರೆಗಳಿಗೆ ಅಥವಾ ಲಿಂಕ್ಗಳಿಗೆ ನಿಮ್ಮ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ.
ಸರ್ಕಾರದ ಅಧಿಕೃತ ಮಾಹಿತಿ ಅಥವಾ ಗ್ರಾಮ ಒನ್ ಕೇಂದ್ರಗಳನ್ನು ಮಾತ್ರ ಸಂಪರ್ಕಿಸಿ.
Gruha lakshmi status check link: ಇಲ್ಲಿ ಒತ್ತಿ
My self malatesha from Karnataka state, india. I have well experienced in content writing since 2021, we publish daily news.